Friday, November 30, 2018

ಎಲ್ಲರಿಗೂ ನಮಸ್ಕಾರ.
ಇದು ನನ್ನ ಮೊದಲ ಬ್ಲಾಗ್ ನ ಬರವಣಿಗೆ.
ಏನದಾರು ತಪ್ಪಿದ್ದರೆ ಕ್ಷಮೆ ಇರಲಿ...
ಜೀವನದಲ್ಲಿ ಹುಟ್ಟು ಸಾವು ಇದರ ನಡುವೆ ವಿದ್ಯೆ , ಬುದ್ಧಿ, ಕೆಲಸ, ಜವಾಬ್ದಾರಿ, ಸಂಬಂದ, ಆರೋಗ್ಯ ಹೀಗೆ ಒಂದಾ ಎರೆಡಾ ೩ ದಿನದ ಬಾಳು- ಮಾಡಿಕೊಳ್ಳ ಬೇಡ ನೀ ಹಾಳು ಅಂತ ಹಿರಿಯರು ಹೇಳ್ತಾರೆ.
ಆದರೆ ಇದು ಸುಖಾಸುಮ್ಮನೆ ೩ ದಿನದ ಬಾಳಲ್ಲ ಸಾವಿಗೆ ಹತ್ತಿರವಿದ್ದಾಗ ಮಾತ್ರ ಅನಿಸೋದು ಮೂರನೆ ದಿನಕ್ಕೆ ಬಂದೇ ಬಿಟ್ಟೆನೆ ಎಂದು.
ಕಷ್ಟ ಇಷ್ಟಗಳ ನಡುವೆ ಬದುಕುವವನಿಗೆ ಒಂದೊಂದು ದಿನವೂ ಒಂದೊಂದು ಯುಗಗಳೆನಿಸಿ ಬಿಡುತ್ತೆ.
ಈ ವಿಷಯ ಏಕೆಂದರೆ, ನಗುತಾ ಬಾಳುವವನಿಗೆ ಹುಟ್ಟು ಸಾವು ೩ ದಿನ, ಅಳುಮುಂಜಿಯಾಗಿ ಏನನ್ನೂ ಮಾಡದವನಿಗೆ ಹುಟ್ಟು ಸಾವು ಸಾವಿರ ವರುಷ.
ನಿತ್ಯ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ, ನಮ್ಮ ಈ ಆಧುನಿಕ ಜಗದ  ಅವಸರದ ಜೀವನದಲ್ಲಿ ನಮ್ಮವರಿಗೆ ಸಮಯ, ಪ್ರೀತಿ, ಗಮನ ಕೊಡದೆ ಇರುವುದು ವಿಪರ್ಯಾಸವೇ ಸರಿ.
ಮನಸಿಗೆ ನೆಮ್ಮದಿಯಿದ್ದಾಗ ಮಾತ್ರ ಏನನ್ನಾದರೂ ಸಾಧಿಸುವ ಅಥವಾ ಚಟುವಟಿಕೆಯಿಂದ ಕಾರ್ಯಗಳನ್ನು ಮಾಡಲು ಸಾಧ್ಯ.
ಹಾಗಾಗಿ ನಿಮ್ಮನ್ನು ಇಷ್ಟ ಪಡುವವರ ಮತ್ತು ನೀವು ಇಷ್ಟ ಪಡುವವರ ಜೊತೆ ಸ್ವಲ್ಪ ಕಾಲ ಕಳೆದು ಮನಸಾರೆ ಮಾತನಾಡಿಕೊಂಡು ನೋಡಿ, ಮನಸು ಹಗುರಾಗಿ ಮತ್ಯಷ್ಟು ಚೈತನ್ಯದೊಂದಿಗೆ ಇನ್ನಷ್ಟು ಖುಷಿಯು ಪುಟಿದೇಳುತ್ತದೆ.
ಇದು ತಂದೆ ತಾಯಿಯಾಗರಿಬಹು, ಅಣ್ಣ- ತಮ್ಮ, ಅಕ್ಕ- ತಂಗಿ , ಸ್ನೇಹಿತರು, ಪಕ್ಕದಲ್ಲಿ ಇರುವ ಪರಿಚಿತರು ಯಾರೇ ಆಗಿದ್ದರು ಅವರೊಂದಿಗೆ ದಿನವೂ ಸ್ವಲ್ಪ ಸಮಯ ಕಳೆಯಿರಿ ಜೀವನವನ್ನು ಆನಂದಿಸಿ.
ವಂದನೆಗಳೊಂದಿಗೆ ನಿಮ್ಮ ಗೆಳೆಯ  - ಉಮೇಶ್

No comments:

Post a Comment